Wednesday, 25 December 2013

ನನ್ನ ಗೆಳತಿ

ನನ್ನ ಗೆಳತಿ
ನೀ ನನ್ನ ಜೀವಕೆ ಒಡತಿ
ನನ್ನ ಗೆಳತಿ ನನ್ನ ಗೆಳತಿ
ನೀ ನನ್ನ ಭಾವಕೆ ಸ್ಫೂರ್ತಿ
ನನ್ನೊಲವು ಬಯಸಿದೆ ನಿನ್ನ ಮನವ
ಹೊಂಬೆಳಕ ಮೂಡಿಸು ಬಾ ಸನಿಹ
ಕಣ್ಣೊಳಗಿಹ ನಿನ್ನ ಬಿಂಬ ಮಿಂಚಾಗಿ ಕಣ್ಣಾ ತುಂಬಾ
ಅಚ್ಚಳಿಯದೆ ಉಳಿದಿದೆ ಮನದಿ ಬೇಕೆನ್ನುತ
ನನ್ನಾಸೆಯ ಹೂ ಬಳ್ಳಿಗೆ
ನಾನಾಗುವೆ ಆಸರೆ
ಬಿಗಿದಪ್ಪಿಕೋ ಒಮ್ಮೆ ನನ್ನ
ಓ ಮುದ್ದು ಮಲ್ಲಿಗೆ
ನಿನ್ನಂದ ಚಂದ ಮನಸೂರೆಗೊಂಡಿದೆ
ಮುಂಗಾರು ಮಳೆಯಂತೆ ಈ ಹೃದಯ ಕಾದಿದೆ
ಪ್ರೇಮಸಿಂಚನದ ಹನಿಗಳ ಸುರಿಸಿ
ಹೃದಯದ ಭಾವ ತಣಿಸು ಬಾ ಗೆಳತಿ
ನಿನ್ನ ನೋಡದ ದಿನ ಬರೀ ಕತ್ತಲು
ನನ್ನ ಮನಕೆ ಅಂದು ದಾರಿ ಇಲ್ಲ ಎತ್ತಲೂ
ಗೆಳೆಯನ ಮರೆಯದಿರು ನೀ ದೂರ ಹೋಗದಿರು
ನೀ ಬರುವವರೆಗೂ ನೆನಪುಗಳೇ ಸುತ್ತಲೂ

ನೆನಪುಗಳ ಮಾತು ಮಧುರ.. |

ನೆನಪುಗಳು ಹಾಗೆಯೇ. ಯಾವ ರೀತಿಯಲ್ಲಿ ಮನದಲ್ಲಿ ಮೀಟುತ್ತವೆಯೋ ಹೇಳಲು ಬರುವುದಿಲ್ಲ. ಅವುಗಳ ಉಗಮಕ್ಕೆ ಕಾರಣೀಭೂತವಾದ ಯಾವುದಾದರೂ ಒಂದು ಮಾತು, ಘಟನೆ, ಓದಿನ ಸಾಲು,ವ್ಯಕ್ತಿಯ ಚಿತ್ರ, ಕವನದ ಸಾಲು, ನೋಡಿದ ಚಲಚಿತ್ರದ ತುಣುಕು ಯಾವುದಾದರೂ ಇರಬಹುದು. ತಾವು ಕಳೆದ ಸುಖಿಸಿದ ಸುಖಿ ದಿನಗಳನ್ನು ಅಥಾವ ದುಃಖಿ ದಿನಗಳನ್ನು ಆ ಸಂದರ್ಭದ ಸ್ಥಾಯಿಗೆ ನಮ್ಮನ್ನು ಕರೆದುಕೊಂಡು ಹೋಗಿಬಿಡುತ್ತವೆ. ಅವುಗಳಿಗೆ ಅಂಥ ತಾಕತ್ತು ಇರುತ್ತದೆ.

ಆಗಲೇ ಇರಬೇಕು ನಾವು ಓದುವ ಕಥೆ, ನೋಡುವ ಚಿತ್ರ, ಕೇಳುವ ಹಾಡು, ಮಾತನ್ನಾಡುವ ಮಾತು ನಮ್ಮ ಮನ ಮುಟ್ಟುವುದು ಮತ್ತು ಅದು ತುಂಬ ಇಷ್ಟವಾಗುವುದು. ಅದು ನಮ್ಮ ನೆನಪನ್ನು ಕೆಣಕಬೇಕು ಮತ್ತು ಆ ನೆನಪಿನ ಮೆರವಣಿಗೆಯನ್ನು ಕಾಣುವಂತೆ ಮಾಡು ಜಾದುತನವನ್ನು ಹೊಂದಿರಬೇಕು. ಆಗ ಮಾತ್ರ ಅದೊಂದು ಗಟ್ಟಿ ವಸ್ತುವಾಗಿರುತ್ತದೆ.

ನಾವು ನಮ್ಮ ಬಿಡುವಿನ ವೇಳೆ ನಮ್ಮ ಮನಸ್ಸಿನ ಬೋರ್ ಹೋಗಿಸಬೇಕು ಎಂದರೇ ಯಾವುದಾದರೂ ಸೃಜಶೀಲವಾದ ಹೊಸತನದ ಘಳಿಗೆಗಾಗಿ ಕಾತರಿಸುತ್ತೇವೆ. ಅಲ್ಲಿ ನಮ್ಮನ್ನು ನಾವು ನೋಡಿಕೊಳ್ಳುವ ನಮ್ಮ ಸಂತೋಷ ಅಥವಾ ನಮ್ಮ ದುಃಖಗಳನ್ನು, ಕಳೆದು ಹೋದ ಕ್ಷಣಗಳ ಪುನರ್ ಮೆಲುಕು ಹಾಕಿಕೊಳ್ಳುವ ಕ್ಷಣಕ್ಕಾಗಿ ಕಾತರಿಸುತ್ತೇವೆ. ಅವುಗಳನ್ನು ಇಂದಿನ ಈ ಕಲಾ ಪರಿಕರಗಳಾದ ಯಾವುದಾದರೂ ಒಂದು ಮಾಧ್ಯಮದ ಮೂಲಕ ಪುನಃ ನಮ್ಮ ಇತಿಹಾಸದಲ್ಲಿ ಕಂಡ ಕ್ಷಣಗಳ ನೆನಪನ್ನು ಹೊಂದಿಸಿಕೊಂಡು ಇಂದು ನಲಿಯುತ್ತಾ ಇರುತ್ತೇವೆ.

ಇಂದು ಕಂಡ ಈ ಕ್ಷಣಗಳ ಸಂತಸವನ್ನು ಮನದ ಒಂದು ಮೂಲೆಯಲ್ಲಿ ಹಾಗೆಯೇ ಅಚ್ಚು ಮಾಡಿ ಇಟ್ಟು ಇದನ್ನು ಪುನಃ ಎಂದಾದರೂ ಒಂದು ದಿನ ಮತ್ತೊಂದು ಬಗೆಯಲ್ಲಿ ಮೆಲಕು ಹಾಕಿಕೊಳ್ಳುತ್ತಾ ಪುನಃ ಸಂತೋಷಿಸುತ್ತೇವೆ. ಈ ನಮ್ಮ ಮಾನವ ಜನ್ಮಕ್ಕೆ ಮಾತ್ರ ಇಂಥ ಒಂದು ರೀತಿಯ ಬಹು ಅಮೊಲ್ಯ ವರದಾನವನ್ನು ಆ ಭಗವಂತ ಕರುಣಿಸಿದ್ದಾನೆ ಎಂದರೇ ತಪ್ಪಾಗುವುದಿಲ್ಲ. ಇದೊಂದೇ ಮನುಷ್ಯನನ್ನು ಉಳಿದ ಎಲ್ಲಾ ಪ್ರಾಣಿಗಳ ಜಗತ್ತಿನಿಂದ ಬೇರೆ ಮಾಡಿ ಇಟ್ಟಿರುವುದು.

ಮನುಷ್ಯ ತಾನು ಬೆಳೆಯುತ್ತಾ ಬೆಳೆಯುತ್ತಾ ತನ್ನ ಜೀವನದ ಹಲವಾರು ಅಮೋಲ್ಯವಾದ ಕ್ಷಣಗಳ ಹನಿಗಳನ್ನು ತನ್ನ ಅನುಭವ ಎಂಬ ಮೂಸೆಯಲ್ಲಿ ಶೇಕರಿಸಿಕೊಂಡು ಜೀವನದ ಪ್ರಯಾಣವನ್ನು ಬೆಳೆಸುತ್ತಾನೆ. ಅಲ್ಲಿ ಅವನಿಗೆ ಸಿಗುವ ಯಾವುದೇ ಕ್ಷಣಗಳಾಗಿರಬಹುದು. ನೋವು, ನಲಿವು, ಸ್ನೇಹ, ಬಂದುತ್ವ, ಕಷ್ಟ, ಸಂತಸ, ಸಿಟ್ಟು, ಸೇಡವು, ಕರುಣೆ, ಕಲಿಯುವಿಕೆ ಇತ್ಯಾದಿ. ಹೀಗೆ ನಾನಾ ರೀತಿಯ ವಿವಿಧ ಬಗೆಯ ಜೀವನ ಪಾಠಗಳ ಸರಮಾಲೆಯ ನೆನಪಿನ ಗೊಂಚಲನ್ನೇ ತನ್ನಲ್ಲಿಟ್ಟುಕೊಂಡಿರುತ್ತಾನೆ. ಅದಕ್ಕೆ ಹೇಳುತ್ತಾರೆ.. ನೆನಪುಗಳ ಮಾತು ಮಧುರ...

ತಾನು ಕಂಡುಂಡ ಆ ಕ್ಷಣಗಳ ಖಜಾನೆಯನ್ನು ಅವನು ಯಾವಾಗಲಾದರೂ ಪುನಃ ಸಮಯ ಸಿಕ್ಕಾಗ ತೆರೆದು ನೋಡುವ ಕ್ಷಣಕ್ಕಾಗಿ ಕಾತರಿಸುತ್ತಾ ಇರುತ್ತಾನೆ. ಕಾತರಿಸುತ್ತಲೇ ಇರಬೇಕು. ಯಾಕೆಂದರೇ ಅವನು ಮನುಷ್ಯ. ಅವನಿಗೆ ಅವನು ಅನುಭವಿಸಿದ ಅನುಭವದ ಘಳಿಗೆಗಳು ಅವುಗಳು ಎಂಥವೇ ಆಗಿರಲಿ ಅವನಿಗೆ ಅವುಗಳು ಸುವರ್ಣಪುತ್ಥಳಿಗಳೇ ಸರಿ. ಅವನು ಅನುಭವಿಸಿದ ಕಟ್ಟ ಕಡೆಯ, ಕೀಳದ ಒಂದು ಚಿಕ್ಕ ಅವಮಾನವನ್ನು ಅವನು ಯಾವಾಗಲಾದರೂ ಪುನಃ ಹಿಂತಿರುಗಿ ನೋಡಬಯಸುತ್ತಾನೆ. ಅವುಗಳನ್ನು ಪುನಃ ಶೃತಿಯಂತೆ ಮೀಟುವ ಕಲಾ ಪ್ರಕಾರಗಳೇ ಮನುಷ್ಯನಿಗೆ ಮಾತ್ರವೇನೋ ಎಂದು ಇರುವ ಕಲಾ ಪ್ರಕಾರಗಳಾದ ಸಂಗೀತ, ಸಾಹಿತ್ಯ, ನೃತ್ಯ, ಚಲನಚಿತ್ರ ಮಾದ್ಯಮಗಳು.

ಈ ಮೇಲಿನ ಯಾವುದಾದರೂ ಒಂದರಲ್ಲಿ ಒಬ್ಬ ವ್ಯಕ್ತಿಗೆ ಅಸಕ್ತಿ ಇರಲೇ ಬೇಕು. ಇದ್ದೇ ಇರುತ್ತದೆ. ಯಾಕೆಂದರೇ ಮನುಷ್ಯ ತಾನು ಆರೋಗ್ಯಕರವಾಗಿ ಮುಂದೆ ಬೆಳೆಯಬೇಕೆಂದರೆ ಇವುಗಳಲ್ಲಿ ಯಾವುದಾದರೂ ಒಂದರಲ್ಲಿ ತನ್ನನ್ನು ತಾನು ತೋಡಗಿಸಿಕೊಂಡಿರಲೇಬೇಕು. ತನ್ನ ಬಿಡುವಿನ ವೇಳೆ ಅದರಲ್ಲಿ ತಾನು ಮುಳುಗಿ ಹೋಗಲೇಬೇಕು ಎಂದು ನಿತ್ಯ ಕಾತರಿಸುತ್ತಿರುತ್ತಾನೆ. ಯಾಕೆಂದರೇ ತಾನು ತನ್ನ ಗತ ದಿನದ ವೈಭಗಳನ್ನು ಪುನಃ ನೆನಪು ಮಾಡಿಕೊಳ್ಳಲು, ಪುನಃ ಮನದ ಪಟಲದಲ್ಲಿ ಅದರ ವೈಭವದ ಮೆರವಣಿಗೆಯನ್ನು ಕಂಡು ತನ್ನ ಅಂದಿನ ಆ ಸಮಯದ ವರ್ತನೆ, ತನ್ನ ಪಾತ್ರವನ್ನು ಪರಮಾರ್ಶೆ ಮಾಡಿಕೊಳ್ಳಲು ಇಷ್ಟಪಡುತ್ತಾನೆ.

ತಾನು ಅನುಭವಿಸುವ ಈಗಿನ ಈ ಕಲಾ ಮಾದ್ಯಮಗಳ ಪಾತ್ರಗಳಾದ ಕಥೆಯಲ್ಲಿನ ನಾಯಕ ನಾಯಕಿಯ ಜೀವನ, ಹಾಡಿನಲ್ಲಿ ಬರುವ ನಾಯಕನ ಕಷ್ಟದ ಸನ್ನಿವೇಶ, ಸಿನಿಮಾದಲ್ಲಿ ಬರುವ ಅಲ್ಲಿನ ಅತಿ ಮೆಚ್ಚುಗೆಯ ಸನ್ನಿವೇಶವನ್ನು ತಾನು ಕಂಡೂಂಡ ಕ್ಷಣಗಳ ಜೊತೆಗೆ ಹೊಲಿಸಿಕೊಂಡು ತುಂಬ ಮಹಾನಂದವನ್ನು ಆ ಕ್ಷಣದಲ್ಲಿ ಮೈಮೆರತು ತಾನು ಅಂದು ಹೀಗೆ ಮಾಡಿದ್ದೇ. ತನ್ನವಳು ನನಗೆ ಅಂದು ಇವಳಂತೆ ಮಾಡಿದ್ದಳು. ತಾನು ಅಂದು ಹಾಗೆ ಮಾಡಬಾರದಗಿತ್ತು... ಹೀಗೆ ನಾನಾ ರೀತಿಯ ಮನಸ್ಸಿನ ವ್ಯವಕಲನ ಸಂಕಲನಗಳನ್ನು ಮಾಡುತ್ತಾ ಮಾಡುತ್ತಾ.. ಮುಂದೆ ನಾನು ಹೇಗೆ ಬಾಳಬಹುದು. ಯಾವುದರಲ್ಲಿ ತಪ್ಪಾಯಿತು.. ಎನ್ನುತ್ತಾ ಅವನು ಇನ್ನೂ ಹೆಚ್ಚು ಅರ್ಥವಂತಿಕೆಯನ್ನು ನಿತ್ಯ ಜೀವನದಲ್ಲಿ ಕಾಣಲು ಪ್ರಾರಂಭಿಸುತ್ತಾನೆ.

ನಮ್ಮ ಕಲಾಕರರು ಸಹ ತಾವು ಕಂಡುಕೊಂಡ ಜೀವನದ ಸತ್ಯಗಳನ್ನೇ ತಮ್ಮ ಕಲಾಪ್ರಕಾರಗಳಲ್ಲಿ ತರುವರು. ಯಾಕೆಂದರೇ ವ್ಯಕ್ತಿ ತಾನು ಎಷ್ಟೇ ಬೆಳೆದು ನಾನು ಬೇರೆ ಎಂದು ಹೇಳಲು ಬರುವುದಿಲ್ಲ. ತಾನುಂಡ ನೋವು, ನಲಿವುಗಳನ್ನು ಕಂಡ ಪೆಟ್ಟುಗಳನ್ನೇ ತನ್ನ ಕಲ್ಪನೆಯ ಮಾದ್ಯಮದಲ್ಲಿ ವಿವಿಧ ಪಾತ್ರಗಳ ಮೂಲಕವೋ, ತಾನೇ ಒಂದು ಪ್ರತೀಕವಾಗಿ ನಿಂತೂ ಅಲ್ಲಿ ಪರಮಾರ್ಶಿಸಿ ತಾನು ಗೊತ್ತು ಮಾಡಿಕೊಂಡ ಒಂದು ನಿಲುವನ್ನೋ, ಆದರ್ಶವನ್ನೋ ಇದು ಹೀಗೆ ಇರಬೇಕಾಗಿತ್ತು ಎಂದು ನಿರೂಪಿಸುತ್ತಾನೆ. ಅದಕ್ಕೆ ಪೂರಕವಾಗುವುದು ಅವನು ತನ್ನ ಜೊತೆಯವರೊಡನೆ ತನ್ನ ಜೀವನದಲ್ಲಿನ ಗತ ಸಮಯದ ಸನ್ನಿವೇಶಗಳೇ. ಅವುಗಳನ್ನು ಬಿಟ್ಟು ಅವನು ಬೇರೆಯದನ್ನು ಬರೆಯಲು, ಹಾಡಲು, ಚಿತ್ರಿಸಲು ಮತ್ತು ಚಿಂತಿಸಲು ಎಂದೂ ಸಾಧ್ಯವಿಲ್ಲ.

ಅದ್ದರಿಂದಲೇ ಅಂಥ ಸ್ಪರ್ಷವನ್ನು ಹೊಂದಿರುವ ಯಾವುದೇ ಸಿನಿಮಾವಾಗಲಿ, ಕಥೆಯಾಗಲಿ, ಕವಿತೆಯಾಗಲಿ ತುಂಬ ಸುಲಭವಾಗಿ ನಮ್ಮನ್ನು ತುಂಬ ಕಾಡುತ್ತವೆ. ಯಾಕೆಂದರೆ ಅಲ್ಲಿ ನಾವು ಅನುಭವಿಸಿದ ನೋವಿರುತ್ತದೆ, ವಿರಹವಿರುತ್ತದೆ, ಕಷ್ಟವಿರುತ್ತದೆ, ಪ್ರೀತಿಯಿರುತ್ತದೆ ಮತ್ತು ನಮ್ಮಷ್ಟೇ ಸ್ಥಾನವನ್ನು ಮಾನವನ್ನು ಅಲ್ಲಿನ ನಾಯಕ-ನಾಯಕಿ ಹೊಂದಿರುತ್ತವೆ. ಅಂಥವುಗಳೇ ಹೆಚ್ಚು ಕಾಲ ಜನ ಮಾನಸದಲ್ಲಿ ನೆಲೆಯಾಗುವುದು.

ಅದಕ್ಕೆ ಹೇಳುವುದು ಜೀವನವೆಂಬುದು ಒಂದು ವಿಶ್ವವಿದ್ಯಾ


Monday, 23 December 2013

ಜೋಗದ ಸಿರಿ

ಜೋಗದಸಿರಿ ಬೆಳಕಿನಲ್ಲಿ
ತುಂಗೆಯ ತೆನೆ ಬಳುಕಿನಲ್ಲಿ
ಸಹ್ಯಾದ್ರಿಯ ಲೋಹದದಿರ
ಉತ್ತುಂಗದ ನಿಲುಕಿನಲ್ಲಿ
ನಿತ್ಯ ಹರಿದ್ವರ್ಣ ವನದ
ತೇಗ,ಗಂಧ ತರುಗಳಲ್ಲಿ
ನಿತ್ಯೋತ್ಸವ ತಾಯಿ ನಿತ್ಯೋತ್ಸವ ನಿನಗೆ

ಇತಿಹಾಸದ ಹಿಮಲಿನ
ಸಿಂಹಾಸನ ಮಾಲೆಯಲ್ಲಿ
ಗತಸಾಹಸ ಸಾರುತಿರುವ
ಶಾಸನಗಳ ಸಾಲಿನಲ್ಲಿ
ಒಲೆಗರಿಯ ಸಿರಿಗಳಲ್ಲಿ
ದೇಗುಲಗಳ ಭಿತ್ತಿಗಳಲ್ಲಿ
ನಿತ್ಯೋತ್ಸವ ತಾಯಿ ನಿತ್ಯೋತ್ಸವ ನಿನಗೆ

ಹಲವೆನ್ನದ ಹಿರಿಮೆಯೆ
ಕುಲವೆನ್ನದ ಗರಿಮೆಯೆ
ಸದ್ವಿಕಾಸ ಶೀಲ ನುಡಿಯ
ಲೋಕಾಮೃತ ಸೀಮೆಯೆ
ಈ ವತ್ಸರ ನಿರ್ಮತ್ಸರ
ಮನದುದಾರ ಮಹಿಮೆಯೆ
ನಿತ್ಯೋತ್ಸವ ತಾಯಿ ನಿತ್ಯೋತ್ಸವ ನಿನಗೆ


My facebook address...

Www.facebook.com/manju.druva


ನನ್ನ ಕವನಗಳು ೨

* ಆಶಯ *                                                                     :     ಮಂಜು.ಆರ್
ಕಾಲಗರ್ಭದ ಸುಳಿಯಲ್ಲಿ ಸಿಲುಕದೆ
ಭೂತ,ಭವಿಷ್ಯ, ವರ್ತಮಾನವನು
ಮೆಟ್ಟಿ ನಿಂತು ಅಲ್ಲಿ ಅಂಕುರಿಸಿ
ಅಟ್ಟಹಾಸವನು ಮೆರೆಯುವ ಕವಿತೆಯಲ್ಲ....ನನ್ನದು...

ಅನಾದಿ ಕಾಲದಿಂದಲೂ ನೋವ ತಿಂದು
ಕತ್ತಲೆಯಲ್ಲಿನ ಕತ್ತಲೆಯಲ್ಲಿ
ಬದುಕು ಸಾಗಿಸುತ್ತಿರುವವರ,ಅವರ
ಬಾಳಿಗೆ ಹಣತೆಯಾಗುವ ಕವಿತೆ....ನನ್ನದು...

ಪ್ರೀತಿ,ಪ್ರೇಮ,ಕಾಮಗಳ ನಡುವೆ
ನಲುಗಿಸಿ,ಧರ್ಮ,ವೈರಾಗ್ಯಗಳಲ್ಲಿ
ಬಳಲಿಸಿ,ಗುಪ್ತವಾದ ಸುಪ್ತ
ಮನಸ್ಸಿನೊಂದಿಗೆ ಆಡುವ ಕವಿತೆಯಲ್ಲ....ನನ್ನದು...

ಕಗ್ಗತ್ತಲೆಯಿಂದ ಬೆಳಕಿನೆಡೆಗೆ
ಕೈಹಿಡಿದು ನಡೆಸುವ,ಬರುವ
ಕಷ್ಟಗಳ ಮಥಿಸುವ ಕಲೆ
ಹೇಳುವ ಜಾತ್ಯಾತೀತವಾದ ಕವಿತೆ....ನನ್ನದು... 


ನನ್ನ ಕವನಗಳು

* ಯಾರು ಮರೆತ ಮಕ್ಕಳಿವರು *                                           :     ಮಂಜು.ಆರ್
ಶಿಕ್ಷಣಕೆ ಹೊರತಾಗಿ ಶಿಕ್ಷೆಯ ಪಡೆದವರು
ಕಡುಗಪ್ಪು ಮೈ ಬಣ್ಣಕ್ಕೆ ಸಿಮೆಂಟ್
ಬಳಿದು ಸುಡುಸುಡು ಬಿಸಿಲಿನಲಿ
ಕೆಂಪು ನಸುಗೆಂಪು ಇಟ್ಟಿಗೆ ಹೊತ್ತವರು.......

ಹೊತ್ತಿನ ಊಟಕೆ ಹೊತ್ತಿಗೆ ಬಿಟ್ಟವರು
ಲಿಂಗಭೇದವಿಲ್ಲವಿಲ್ಲಿ, ಎಲ್ಲರೂ ಬೆರೆತು
ದುಡಿವಂತವರು ಬೆವರಹನಿಯ ಉಪ್ಪಿನಲೆ
ಸಕ್ಕರೆಯ ಸಿಹಿಯುಂಡ ಜೀವಗಳವು.....

ತಾಯಿಯ ಕಣ್ಮಣಿ , ಅತಿ ಕಷ್ಟವಿ ಗಣಿ
ನಿಕೃಷ್ಟವಿ ಕೃತ್ಯ ಅಲ್ಲಿಯೆ ಗಡಸುಗಟ್ಟಿ
ಮಡಿದವರು, ಮಡಿದು ಮಣ್ಣಾದವರು
ಯಾರು?
.
.
.
ಯಾರು?
ನಾವು-ನೀವು ನಿರ್ಲಕ್ಷ್ಯ ಮಾಡಿ ಬಿಟ್ಟವರು
ಇವರು ಬಾಲರು, ಬಾಲಕಾರ್ಮಿಕರು
ಎಳೆಮನದ ಪಿಳಿಪಿಳಿ ಕಣ್ಣ್ ಬಿಡುವ
ಹಸಿ ಬಯಕೆಯ ನಿರ್ಭಾಗ್ಯರು.....

ಬನ್ನಿ ಈ ಬಾಲಕಾರ್ಮಿಕತೆಯನ್ನು ತೊಡೆದು ಹಾಕುವಂತೆ ಸಂಕಲ್ಪಿಸೋಣ.......

                         


Sunday, 22 December 2013

ಒಬ್ಬ ವಿರಹಿಯ ಅಂತರಾಳದ ಸಂದೇಶ........

ಹೊರಗೆ ಹೊಟ್ಟೇಕಿಚ್ಚಾಗೋವಷ್ಟು ಮಳೆ ಸುರಿತಿದೆ ಕಣೆ, ಅಂತ ಜಡಿಮಳೆಗೆ ಪ್ರತಿಸ್ಪರ್ಧಿಯೇನೋ ಅನ್ನೋ ಹಾಗೆ ನಿನ್ನ ನೆನಪುಗಳು ಈ ಎದೆಯ ಹೊಲದೊಳಗೆ ಸುರಿತಿದೆ, ಸುರಿತಿರೋ ಈ ಮಳೆಯಲ್ಲಿ ನಿನಗೆ ಮಾತ್ರ ಕೇಳಿಸೋ ಹಾಗೆ ನಿನ್ನ ಹೆಸರ ಕೂಗಿ ಕರಿಬೇಕು, ಸುರಿತಿರೋ ಈ ಮಳೆಯಲ್ಲಿ ನಿನ್ನೊಮ್ಮೆ ಬಿಗಿದಪ್ಪಿ ಬೆಚ್ಚಗಾಗ್ಬೇಕು,..............

ಎಂಥಾ ಹುಚ್ಚ ನಾನು, ನೀ ಬರೋದಿಲ್ಲ ಅಂತ ಗೊತ್ತಿದ್ರು, ಈ ಮನಸ್ಯಾಕೋ ಕನಸು ಕಾಣೋದನ್ನ ನಿಲ್ಲಿಸ್ತನೇಯಿಲ್ಲ, ಛೇ, ಹಾಳಾದ್ ಮನಸ್ಸು ಮಾತೇ ಕೇಳೋಲ್ಲ ದಿನಕ್ಕೊಂದು ಕನಸನ್ನ ಸೃಷ್ಟಿ ಮಾಡ್ತನೇಯಿರತ್ತೆ.......

ಕೊನೆಗೂ ನನ್ನ ಮರೆತೇ ಬಿಟ್ಯ? ನಿನ್ನ ಬಯಸಿ ಬೆನ್ನೆರಿದ್ದವನಿಗೆ, ಜಗತ್ತನ್ನೆ ಮರೆಸುವ ಮಾತುಗಳನ್ನಾಡುತ್ತಿದ್ದ ನೀನೇನ ಒಂದೆ ಒಂದು ಮಾತಾಡದೆ ಮೌನವಾಗಿರೋದು? ಅದು ಒಂದು ಕಾರಣವನ್ನೂ ಹೇಳದೇ? ಕೊನೆಗೂ ಮರೆತೇ ಬಿಟ್ಯ? ನನ್ನ ಕಿರುಬೆರಳಿಗೆ ಬೆರಳು ತಾಗಿಸಿಕೊಂಡು ಮಾತುಗಳಿಲ್ಲದೆ ನಡೆದ ಆ ಸುಂದರ ಸಂಜೆಗಳನ್ನ? ಮರೆತೆಯೇನೊ? "ಅಂದು ನಿನ್ನ ಜನುಮ ದಿನ ತುಂಬು ಕೆನ್ನೆಗಳ ಹಿಡಿದು ಈ ನಗು ಹೀಗೆ ಸದಾ ನಿನ್ನದಾಗಲಿ ” ಅಂದ ಬಂಗಾರದಂತ ಮಾತುಗಳನ್ನ? ಮರೆತೆಯೇನೋ ?  ಇದೆಲ್ಲವನ್ನು ಮರೆತವಳಿಗೆ ಈ ಪಾಪಿಯನ್ನ ಮರೆಯುವುದು ಅಷ್ಟು ಕಷ್ಟವಾಗಲಿಲ್ಲ ಅಲ್ಲವೇನೋ? ಬದುಕು ಅನ್ನುವುದು ಇಷ್ಟೊಂದು ಘೋರ ಅಂತ ನಿನ್ನ ವಿದಾಯದ ನಂತರವೇ ನನಗೆ ಗೊತ್ತಾಗಿದ್ದು ಗೊತ್ತ? ಪ್ರೀತಿಯ ಗೆಳತಿ ಜೀವದ ಗೆಳತಿ ಒಂದೆ ಒಂದು ಮಾತನಾಡದೆ 2 ವರ್ಷದ ಹಸುಗುಸಿನಂತಹ ಪ್ರೀತಿಯನ್ನ ಬಿಟ್ಟು ಹೋಗ್ತಾಳೆ ಅಂತ ಯಾವ ಪಾಪದ ಹುಡುಗ ತಾನೆ ನಂಬುತ್ತಾನೆ ಹೇಳು? ನಿಜ ಹೇಳು ನಾನು ಕಂಡ ಕನಸುಗಳನ್ನ ಲೆಕ್ಕ ಹಾಕಿದರೇ ಆ ಚುಕ್ಕಿಗಳು ಸಾಟಿಯಾಗುತ್ತಿದ್ದವ? ಕೊನೆಗು ಅಷ್ಟು ಕನಸುಗಳಲ್ಲಿ ಒಂದೆ ಒಂದು ಕೂಡ ನನಸಾಗಲಿಲ್ಲವಲ್ಲೋ? ಅಷ್ಟು ಹೀನ ಶಕುನದವನು ನಾನು? ದೇವರಲ್ಲಿ ಕೇಳಿಕೊಂಡ ಬಹುಸಂಖ್ಯಾತ ಬೇಡಿಕೆಗಳಲ್ಲಿ ” ನಾನು ನಿನ್ನ ಜೊತೆ ಬದುಕಿ ಬಾಳಬೇಕು” ಅಂತ ಕೇಳಿಕೊಂಡ ಒಂದೇ ಒಂದು ವರ ಸಾಕಾಗಿತ್ತು ಕಣೆ ಈ ಪಾಪಿ ಜೀವಕ್ಕೆ ಸಾಕಿತ್ತು ಆ ದೇವರು ಅದಕ್ಕು ಅಸ್ತು ಅನ್ನಲಿಲ್ಲ ನೋಡು.

ಬಿಡು ನೀ ಹೇಗಿದ್ದೀಯಾ? ಸುರಿಯೋ ಈ ಮಳೆ ನೋಡುನೋಡುತ್ತಿದ್ದಾಗೆ ಯಾಕೋ ನೀ ತುಂಬಾ ನೆನಪಾದೆ, ನಿನ್ನ ಮರೆಯೋಕೆ ನನಗಾಗ್ತಿಲ್ಲ ಕಣೆ, ಕೊನೆಯದಾಗಿ ನೀ ಹೇಗಿದ್ದೀಯ ಅನ್ನೋದಕ್ಕಾದ್ರು, ಚೆನ್ನಾಗಿದಿನಿ ಅನ್ನೋ ಒಂದು ಪಾಪದ ಪದ ಬರೆದು ಕಳಿಸ್ತೀಯಾ


ನಲ್ಲೆ ನಿನ್ನ ಕೆನ್ನೆ ಸುತ್ತ ಜೇನಿಗೇನು ಕೆಲಸ / nalle ninna kenne sutta

ನಲ್ಲೆ ನಿನ್ನ ಕೆನ್ನೆ ಸುತ್ತ ಜೇನಿಗೇನು ಕೆಲಸ ನನ್ನ ನೋಡದಂಥ ಸಿಟ್ಟೇ ಏಕೆ ಇಂಥ ವಿರಸ || ನಲ್ಲೆ || ನನ್ನ ಒಲವು ಪುಟ್ಟ ಹಣತೆ ಹಚ್ಚಿದವಳು ನೀನೆ ಆರದಂತೆ ಕಾವು ಕೊಟ್ಟು ಉರಿಸಿದವರು ಯಾರೇ || ನಲ್ಲೆ || ಚಂದ್ರಬಿಂಬ ತುಳುಕದಂತೆ ಕೊಳದ ತುಂಬ ಹೂ ನನ್ನ ಎದೆಯ ಆಳದೊಳಗೆ ನೂರು ಬಗೆಯ ನೋವು || ನಲ್ಲೆ || ಚದುರಬೇಕೆ ಮುಗಿಲ ಚಿತ್ರ ಬಾನ ಕಣ್ಣಿನಿಂದ ಹೊರಳಬೇಕೆ ನಿನ್ನ ಚಿತ್ತ ನನ್ನ ಸನಿಹದಿಂದ || ನಲ್ಲೆ || ಸಾಹಿತ್ಯ – ? ಸಂಗೀತ / ಗಾಯನ – ಸಿ ಅಶ್ವಥ್ download nalle ninna kenne

ನನ್ನ ಇಷ್ಟದ ಭಾವಗೀತೆ( ನನ್ನ ಇನಿಯನ ನೆಲೆಯ ಬಲ್ಲೆಯೇನೆ)

ನನ್ನ ಇನಿಯನ ನೆಲೆಯ ಬಲ್ಲೆಯೇನೆ
ಹೇಗೆ ತಿಳಿಯಲಿ ಅದನು ಹೇಳೇ ನೀನೆ

ಇರುವೆ ಸರಿಯುವ ಸದ್ದು
ಮೊಗ್ಗು ಬಿರಿಯುವ ಸದ್ದು
ಮಂಜು ಇಳಿಯುವ ಸದ್ದು ಕೇಳಬಲ್ಲ
ನನ್ನ ಮೊರೆಯನು ಏಕೆ ಕೇಳಲೊಲ್ಲ

ಗಿರಿಯ ಎತ್ತಲು ಬಲ್ಲ
ಶರಧಿ ಬತ್ತಿಸಬಲ್ಲ
ಗಾಳಿ ಉಸಿರನೆ ಕಟ್ಟಿ ನಿಲಿಸಬಲ್ಲ
ನನ್ನ ಸೆರೆಯನು ಏಕೆ ಬಿಡಿಸಲೊಲ್ಲ

ನೀರು ಮುಗಿಲಾದವನು
ಮುಗಿಲು ಮಳೆಯಾದವನು
ಮಳೆ ಬಿದ್ದು ತೆನೆಎದ್ದು ತೂಗುವವನು
ನಲ್ಲೆ ಅಳಲನು ಏಕೆ ತಿಳಿಯನವನು

ಸಾಹಿತ್ಯ – ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ
ಸಂಗೀತ – ಸಿ ಅಶ್ವಥ್
ಗಾಯನ – ಎಂ ಡಿ ಪಲ್ಲವಿ

download nanna iniyana neleya