* ಯಾರು ಮರೆತ ಮಕ್ಕಳಿವರು * : ಮಂಜು.ಆರ್
ಶಿಕ್ಷಣಕೆ ಹೊರತಾಗಿ ಶಿಕ್ಷೆಯ ಪಡೆದವರು
ಕಡುಗಪ್ಪು ಮೈ ಬಣ್ಣಕ್ಕೆ ಸಿಮೆಂಟ್
ಬಳಿದು ಸುಡುಸುಡು ಬಿಸಿಲಿನಲಿ
ಕೆಂಪು ನಸುಗೆಂಪು ಇಟ್ಟಿಗೆ ಹೊತ್ತವರು.......
ಹೊತ್ತಿನ ಊಟಕೆ ಹೊತ್ತಿಗೆ ಬಿಟ್ಟವರು
ಲಿಂಗಭೇದವಿಲ್ಲವಿಲ್ಲಿ, ಎಲ್ಲರೂ ಬೆರೆತು
ದುಡಿವಂತವರು ಬೆವರಹನಿಯ ಉಪ್ಪಿನಲೆ
ಸಕ್ಕರೆಯ ಸಿಹಿಯುಂಡ ಜೀವಗಳವು.....
ತಾಯಿಯ ಕಣ್ಮಣಿ , ಅತಿ ಕಷ್ಟವಿ ಗಣಿ
ನಿಕೃಷ್ಟವಿ ಕೃತ್ಯ ಅಲ್ಲಿಯೆ ಗಡಸುಗಟ್ಟಿ
ಮಡಿದವರು, ಮಡಿದು ಮಣ್ಣಾದವರು
ಯಾರು?
.
.
.
ಯಾರು?
ನಾವು-ನೀವು ನಿರ್ಲಕ್ಷ್ಯ ಮಾಡಿ ಬಿಟ್ಟವರು
ಇವರು ಬಾಲರು, ಬಾಲಕಾರ್ಮಿಕರು
ಎಳೆಮನದ ಪಿಳಿಪಿಳಿ ಕಣ್ಣ್ ಬಿಡುವ
ಹಸಿ ಬಯಕೆಯ ನಿರ್ಭಾಗ್ಯರು.....
ಬನ್ನಿ ಈ ಬಾಲಕಾರ್ಮಿಕತೆಯನ್ನು ತೊಡೆದು ಹಾಕುವಂತೆ ಸಂಕಲ್ಪಿಸೋಣ.......

No comments:
Post a Comment