ಹೊರಗೆ ಹೊಟ್ಟೇಕಿಚ್ಚಾಗೋವಷ್ಟು ಮಳೆ ಸುರಿತಿದೆ ಕಣೆ, ಅಂತ ಜಡಿಮಳೆಗೆ ಪ್ರತಿಸ್ಪರ್ಧಿಯೇನೋ ಅನ್ನೋ ಹಾಗೆ ನಿನ್ನ ನೆನಪುಗಳು ಈ ಎದೆಯ ಹೊಲದೊಳಗೆ ಸುರಿತಿದೆ, ಸುರಿತಿರೋ ಈ ಮಳೆಯಲ್ಲಿ ನಿನಗೆ ಮಾತ್ರ ಕೇಳಿಸೋ ಹಾಗೆ ನಿನ್ನ ಹೆಸರ ಕೂಗಿ ಕರಿಬೇಕು, ಸುರಿತಿರೋ ಈ ಮಳೆಯಲ್ಲಿ ನಿನ್ನೊಮ್ಮೆ ಬಿಗಿದಪ್ಪಿ ಬೆಚ್ಚಗಾಗ್ಬೇಕು,..............
ಎಂಥಾ ಹುಚ್ಚ ನಾನು, ನೀ ಬರೋದಿಲ್ಲ ಅಂತ ಗೊತ್ತಿದ್ರು, ಈ ಮನಸ್ಯಾಕೋ ಕನಸು ಕಾಣೋದನ್ನ ನಿಲ್ಲಿಸ್ತನೇಯಿಲ್ಲ, ಛೇ, ಹಾಳಾದ್ ಮನಸ್ಸು ಮಾತೇ ಕೇಳೋಲ್ಲ ದಿನಕ್ಕೊಂದು ಕನಸನ್ನ ಸೃಷ್ಟಿ ಮಾಡ್ತನೇಯಿರತ್ತೆ.......
ಕೊನೆಗೂ ನನ್ನ ಮರೆತೇ ಬಿಟ್ಯ? ನಿನ್ನ ಬಯಸಿ ಬೆನ್ನೆರಿದ್ದವನಿಗೆ, ಜಗತ್ತನ್ನೆ ಮರೆಸುವ ಮಾತುಗಳನ್ನಾಡುತ್ತಿದ್ದ ನೀನೇನ ಒಂದೆ ಒಂದು ಮಾತಾಡದೆ ಮೌನವಾಗಿರೋದು? ಅದು ಒಂದು ಕಾರಣವನ್ನೂ ಹೇಳದೇ? ಕೊನೆಗೂ ಮರೆತೇ ಬಿಟ್ಯ? ನನ್ನ ಕಿರುಬೆರಳಿಗೆ ಬೆರಳು ತಾಗಿಸಿಕೊಂಡು ಮಾತುಗಳಿಲ್ಲದೆ ನಡೆದ ಆ ಸುಂದರ ಸಂಜೆಗಳನ್ನ? ಮರೆತೆಯೇನೊ? "ಅಂದು ನಿನ್ನ ಜನುಮ ದಿನ ತುಂಬು ಕೆನ್ನೆಗಳ ಹಿಡಿದು ಈ ನಗು ಹೀಗೆ ಸದಾ ನಿನ್ನದಾಗಲಿ ” ಅಂದ ಬಂಗಾರದಂತ ಮಾತುಗಳನ್ನ? ಮರೆತೆಯೇನೋ ? ಇದೆಲ್ಲವನ್ನು ಮರೆತವಳಿಗೆ ಈ ಪಾಪಿಯನ್ನ ಮರೆಯುವುದು ಅಷ್ಟು ಕಷ್ಟವಾಗಲಿಲ್ಲ ಅಲ್ಲವೇನೋ? ಬದುಕು ಅನ್ನುವುದು ಇಷ್ಟೊಂದು ಘೋರ ಅಂತ ನಿನ್ನ ವಿದಾಯದ ನಂತರವೇ ನನಗೆ ಗೊತ್ತಾಗಿದ್ದು ಗೊತ್ತ? ಪ್ರೀತಿಯ ಗೆಳತಿ ಜೀವದ ಗೆಳತಿ ಒಂದೆ ಒಂದು ಮಾತನಾಡದೆ 2 ವರ್ಷದ ಹಸುಗುಸಿನಂತಹ ಪ್ರೀತಿಯನ್ನ ಬಿಟ್ಟು ಹೋಗ್ತಾಳೆ ಅಂತ ಯಾವ ಪಾಪದ ಹುಡುಗ ತಾನೆ ನಂಬುತ್ತಾನೆ ಹೇಳು? ನಿಜ ಹೇಳು ನಾನು ಕಂಡ ಕನಸುಗಳನ್ನ ಲೆಕ್ಕ ಹಾಕಿದರೇ ಆ ಚುಕ್ಕಿಗಳು ಸಾಟಿಯಾಗುತ್ತಿದ್ದವ? ಕೊನೆಗು ಅಷ್ಟು ಕನಸುಗಳಲ್ಲಿ ಒಂದೆ ಒಂದು ಕೂಡ ನನಸಾಗಲಿಲ್ಲವಲ್ಲೋ? ಅಷ್ಟು ಹೀನ ಶಕುನದವನು ನಾನು? ದೇವರಲ್ಲಿ ಕೇಳಿಕೊಂಡ ಬಹುಸಂಖ್ಯಾತ ಬೇಡಿಕೆಗಳಲ್ಲಿ ” ನಾನು ನಿನ್ನ ಜೊತೆ ಬದುಕಿ ಬಾಳಬೇಕು” ಅಂತ ಕೇಳಿಕೊಂಡ ಒಂದೇ ಒಂದು ವರ ಸಾಕಾಗಿತ್ತು ಕಣೆ ಈ ಪಾಪಿ ಜೀವಕ್ಕೆ ಸಾಕಿತ್ತು ಆ ದೇವರು ಅದಕ್ಕು ಅಸ್ತು ಅನ್ನಲಿಲ್ಲ ನೋಡು.
ಬಿಡು ನೀ ಹೇಗಿದ್ದೀಯಾ? ಸುರಿಯೋ ಈ ಮಳೆ ನೋಡುನೋಡುತ್ತಿದ್ದಾಗೆ ಯಾಕೋ ನೀ ತುಂಬಾ ನೆನಪಾದೆ, ನಿನ್ನ ಮರೆಯೋಕೆ ನನಗಾಗ್ತಿಲ್ಲ ಕಣೆ, ಕೊನೆಯದಾಗಿ ನೀ ಹೇಗಿದ್ದೀಯ ಅನ್ನೋದಕ್ಕಾದ್ರು, ಚೆನ್ನಾಗಿದಿನಿ ಅನ್ನೋ ಒಂದು ಪಾಪದ ಪದ ಬರೆದು ಕಳಿಸ್ತೀಯಾ

No comments:
Post a Comment