(ಸುವಿಚಾರ ಕವನಸ್ಪರ್ಧೆಯಲಿ ಪ್ರಥಮ ಬಹುಮಾನ ಪಡೆದ ಕವನ)
ನಿಮಿಷಗಳೊಂದಿಗೆ ನರಳಾಡಿ
ನೋವಿನಿಂದ ಒದ್ದಾಡಿ
ವಿಧಿಯ ಜೊತೆ ಗುದ್ದಾಡಿ
ಸಾವಿನ ಜೊತೆ ಹೋರಾಡಿ,
ನನ್ನನು ಭೂಮಿಗೆ ತರಲು
ಅವಳೆಷ್ಟೊಂದು ಅತ್ತಿರಬಹುದು???
ನನಗಂತೂ ತಿಳಿಯಲೇ ಇಲ್ಲ...!!!
ಅವಳ ನೋವಲ್ಲಿ ಪಾಲು ಕೇಳಲಾಗದೆ
ಬಾಗಿಲ ಹೊರಗೆಯೇ ಕಾಯುತ್ತಾ
ಕೈಕೈಹಿಸುಕಿ ಅತ್ತಿತ್ತ ನಡೆದಾಡುವಾಗ
ತಂದೆಯ ಕಣ್ಣಿಂದಲೂ ಉದುರಿರಬಹುದು
ಒಂದೆರಡು ಕಣ್ಣೀರ ಹನಿಗಳು...,
ನನಗಂತೂ ತಿಳಿಯಲೇ ಇಲ್ಲ...!!!
ಎದೆಯಲ್ಲಿ ಹಾಲು ಬತ್ತಿಹೋಗಿ
ರಾತ್ರಿಯೆಲ್ಲಾ ನಾನು ಹಾಲಿಗಾಗಿ ಅತ್ತಾಗ
ಬರದ ಎದೆಹಾಲಿಗಾಗಿ ಹತಾಶೆಯಿಂದ
ಅವಳೊಮ್ಮೆ ಅವುಡುಗಚ್ಚಿರಬಹುದು...
ನನಗಂತೂ ತಿಳಿಯಲೇ ಇಲ್ಲ...!!!
ಅವಳ ಪರಿಸ್ಥಿತಿಯ ನೋಡಲಾಗದೆ
ನಡುರಾತ್ರಿಯಲಿ ಎದ್ದುಕೂತು,
ಸಾಂತ್ವನಪಡಿಸಲು ಪದಗಳು ಸಿಗದೆ
ತಂದೆ ಪದಗಳಿಗಾಗಿ ತಡಕಾಡಿರಬಹುದು...
ನನಗಂತೂ ತಿಳಿಯಲೇ ಇಲ್ಲ...!!!
ಎದುರಿರುವ ಕಲ್ಲನು ನೋಡದೆ ಎಡವಿಬಿದ್ದು
ತಲೆಯಿಂದ ರಕ್ತಸುರಿದು ಬೊಬ್ಬಿರಿದಾಗ
ಅವಳು ಮಂಜಾದ ಕಣ್ಣಿನಿಂದ
ಕಲ್ಲಿಗೆ ಶಾಪ ಹಾಕಿರಬಹುದು...
ನನಗಂತೂ ತಿಳಿಯಲೇ ಇಲ್ಲ...!!!
ತಂದೆಗೆ ವಿಷಯ ತಿಳಿದು
ನನ್ನ ಖುಷಿಪಡಿಸಲು
ಎಡವಿದ ಕಲ್ಲನ್ನು ಹುಡುಕಿಹೋಗಿ
ಅದಕ್ಕೊಂದು ಗತಿ ಕಾಣಿಸಿರಬಹುದು...
ನನಗಂತೂ ತಿಳಿಯಲೇ ಇಲ್ಲ...!!!
ನನ್ನ ತುಂಟಾಟಗಳು ಅತಿಯಾಗಿ
ದೂರುಗಳು ಮನೆಯವರೆಗೂ ಬಂದು,
ಎಲ್ಲರೂ ಅವಳನ್ನೇ ಬೈದಾಗ
ಅವಳೇಕೆ ಮೌನವಹಿಸಿದಳೆಂದು
ನನಗಂತೂ ತಿಳಿಯಲೇ ಇಲ್ಲ...!!!
ತಂದೆ ಕೋಪವನು ತಡೆಯಲಾಗದೆ
ನನಗೆ ಎರಡೇಟು ಕೊಟ್ಟು,
ಅವಳಿಗೂ ಒಂದಿಷ್ಟು ಬೈಗುಳ ಸುರಿಸಿ
ಆಮೇಲೆ ನನ್ನನೇಕೆ ಮುದ್ದುಗೈದರೆಂದು
ನನಗಂತೂ ತಿಳಿಯಲೇ ಇಲ್ಲ...!!!
ನನಗಂದು ಜ್ವರಬಂದು
ಚಳಿಯಿಂದ ನಡುಗಿದಾಗ,
ರಾತ್ರಿಯಿಡೀ ನನ್ನಬಳಿ ಕೂತ
ಅವಳಿಗೂ ಜ್ವರಬಂದಿರಬಹುದು...
ನನಗಂತೂ ತಿಳಿಯಲೇ ಇಲ್ಲ...!!!
ಮದ್ದಿಗಾಗಿ ದವಾಖಾನೆಗೆ ಅಲೆದಾಡಿ
ನನಗೆ ಕುಡಿಸಲು ಹರಸಾಹಸಪಟ್ಟು
ತಾನು ಕುಡಿದಂತೆ ನಟಿಸಿದಾಗ
ತಂದೆಯ ಜೀವ ಬಾಯಿಗೆ ಬಂದಿರಬಹುದು..
ನನಗಂತೂ ತಿಳಿಯಲೇ ಇಲ್ಲ...!!!
ನಾನಂದು ಮೊದಲಬಾರಿ
ತಂದೆಗೆ ಎದುರಾಗಿ ಮಾತಾಡಿದಾಗ
ತಂದೆಯ ಹೃದಯವೊಮ್ಮೆ
ಬಡಿತ ನಿಲ್ಲಿಸಿರಬಹುದು...
ನನಗಂತೂ ತಿಳಿಯಲೇ ಇಲ್ಲ...
ತಂದೆಯ ಮರಣದ ಬಳಿಕ
ಕಟ್ಟಿಕೊಂಡವಳ ಮಾತುಕೇಳಿ
ಅಮ್ಮನನು ವೃದ್ಧಾಶ್ರಮದಿ ಬಿಟ್ಟುಬಂದಾಗ
ಅಮ್ಮನಿಗೂ "ಜೀವನವಿಷ್ಟೇ" ಎನಿಸಿರಬಹುದು...
ನನಗಂತೂ ತಿಳಿಯಲೇ ಇಲ್ಲ...
ನನಗೋಸ್ಕರ ಕಾದ "ಮುದಿಜೀವ"
ಕೊನೆಗಳಿಗೆಯಲಿ ನನ್ನ ಬರವನ್ನೇ
ಆಸೆಕಣ್ಗಳಿಂದ ಎದುರುನೋಡುತ್ತಾ
ಗುಟುಕು ಪ್ರಾಣವ ಬಿಟ್ಟಿರಬಹುದು..
ನನಗಂತೂ ತಿಳಿಯಲೇ ಇಲ್ಲ...
ನಾನೀಗ ಕಾಯುತಿರುವೆನು,
ವೃದ್ಧಾಶ್ರಮದ ಬಾಗಿಲಲಿ ನಿಂತು
ಮಕ್ಕಳು ಕರೆದೊಯ್ಯಲು ಬರುವರೆಂದು...
ಮಕ್ಕಳಿಗಂತೂ ತಿಳಿಯುತ್ತಲೇ ಇಲ್ಲ...
ಬಹುಷಃ ಮಕ್ಕಳಿಗೆ ತಿಳಿಯುತ್ತಿತ್ತೇನೋ??,
ನನದೀಗಿನ ಸಂಕಟ ಏನೆಂದು....
ಅಂದು ನನಗೆ ತಿಳಿದಿದ್ದರೆ,
"ತಂದೆ-ತಾಯಿ" ಎಂದರೇನೆಂದು...???
ಕೊನೆಗೂ ನನಗಂತೂ ತಿಳಿಯಲೇ ಇಲ್ಲ....
ಮಕ್ಕಳಿಗೆ ತಿಳಿಹೇಳುವ ಹಕ್ಕು ನನಗಿಲ್ಲ.......
ನಿಮಿಷಗಳೊಂದಿಗೆ ನರಳಾಡಿ
ನೋವಿನಿಂದ ಒದ್ದಾಡಿ
ವಿಧಿಯ ಜೊತೆ ಗುದ್ದಾಡಿ
ಸಾವಿನ ಜೊತೆ ಹೋರಾಡಿ,
ನನ್ನನು ಭೂಮಿಗೆ ತರಲು
ಅವಳೆಷ್ಟೊಂದು ಅತ್ತಿರಬಹುದು???
ನನಗಂತೂ ತಿಳಿಯಲೇ ಇಲ್ಲ...!!!
ಅವಳ ನೋವಲ್ಲಿ ಪಾಲು ಕೇಳಲಾಗದೆ
ಬಾಗಿಲ ಹೊರಗೆಯೇ ಕಾಯುತ್ತಾ
ಕೈಕೈಹಿಸುಕಿ ಅತ್ತಿತ್ತ ನಡೆದಾಡುವಾಗ
ತಂದೆಯ ಕಣ್ಣಿಂದಲೂ ಉದುರಿರಬಹುದು
ಒಂದೆರಡು ಕಣ್ಣೀರ ಹನಿಗಳು...,
ನನಗಂತೂ ತಿಳಿಯಲೇ ಇಲ್ಲ...!!!
ಎದೆಯಲ್ಲಿ ಹಾಲು ಬತ್ತಿಹೋಗಿ
ರಾತ್ರಿಯೆಲ್ಲಾ ನಾನು ಹಾಲಿಗಾಗಿ ಅತ್ತಾಗ
ಬರದ ಎದೆಹಾಲಿಗಾಗಿ ಹತಾಶೆಯಿಂದ
ಅವಳೊಮ್ಮೆ ಅವುಡುಗಚ್ಚಿರಬಹುದು...
ನನಗಂತೂ ತಿಳಿಯಲೇ ಇಲ್ಲ...!!!
ಅವಳ ಪರಿಸ್ಥಿತಿಯ ನೋಡಲಾಗದೆ
ನಡುರಾತ್ರಿಯಲಿ ಎದ್ದುಕೂತು,
ಸಾಂತ್ವನಪಡಿಸಲು ಪದಗಳು ಸಿಗದೆ
ತಂದೆ ಪದಗಳಿಗಾಗಿ ತಡಕಾಡಿರಬಹುದು...
ನನಗಂತೂ ತಿಳಿಯಲೇ ಇಲ್ಲ...!!!
ಎದುರಿರುವ ಕಲ್ಲನು ನೋಡದೆ ಎಡವಿಬಿದ್ದು
ತಲೆಯಿಂದ ರಕ್ತಸುರಿದು ಬೊಬ್ಬಿರಿದಾಗ
ಅವಳು ಮಂಜಾದ ಕಣ್ಣಿನಿಂದ
ಕಲ್ಲಿಗೆ ಶಾಪ ಹಾಕಿರಬಹುದು...
ನನಗಂತೂ ತಿಳಿಯಲೇ ಇಲ್ಲ...!!!
ತಂದೆಗೆ ವಿಷಯ ತಿಳಿದು
ನನ್ನ ಖುಷಿಪಡಿಸಲು
ಎಡವಿದ ಕಲ್ಲನ್ನು ಹುಡುಕಿಹೋಗಿ
ಅದಕ್ಕೊಂದು ಗತಿ ಕಾಣಿಸಿರಬಹುದು...
ನನಗಂತೂ ತಿಳಿಯಲೇ ಇಲ್ಲ...!!!
ನನ್ನ ತುಂಟಾಟಗಳು ಅತಿಯಾಗಿ
ದೂರುಗಳು ಮನೆಯವರೆಗೂ ಬಂದು,
ಎಲ್ಲರೂ ಅವಳನ್ನೇ ಬೈದಾಗ
ಅವಳೇಕೆ ಮೌನವಹಿಸಿದಳೆಂದು
ನನಗಂತೂ ತಿಳಿಯಲೇ ಇಲ್ಲ...!!!
ತಂದೆ ಕೋಪವನು ತಡೆಯಲಾಗದೆ
ನನಗೆ ಎರಡೇಟು ಕೊಟ್ಟು,
ಅವಳಿಗೂ ಒಂದಿಷ್ಟು ಬೈಗುಳ ಸುರಿಸಿ
ಆಮೇಲೆ ನನ್ನನೇಕೆ ಮುದ್ದುಗೈದರೆಂದು
ನನಗಂತೂ ತಿಳಿಯಲೇ ಇಲ್ಲ...!!!
ನನಗಂದು ಜ್ವರಬಂದು
ಚಳಿಯಿಂದ ನಡುಗಿದಾಗ,
ರಾತ್ರಿಯಿಡೀ ನನ್ನಬಳಿ ಕೂತ
ಅವಳಿಗೂ ಜ್ವರಬಂದಿರಬಹುದು...
ನನಗಂತೂ ತಿಳಿಯಲೇ ಇಲ್ಲ...!!!
ಮದ್ದಿಗಾಗಿ ದವಾಖಾನೆಗೆ ಅಲೆದಾಡಿ
ನನಗೆ ಕುಡಿಸಲು ಹರಸಾಹಸಪಟ್ಟು
ತಾನು ಕುಡಿದಂತೆ ನಟಿಸಿದಾಗ
ತಂದೆಯ ಜೀವ ಬಾಯಿಗೆ ಬಂದಿರಬಹುದು..
ನನಗಂತೂ ತಿಳಿಯಲೇ ಇಲ್ಲ...!!!
ನಾನಂದು ಮೊದಲಬಾರಿ
ತಂದೆಗೆ ಎದುರಾಗಿ ಮಾತಾಡಿದಾಗ
ತಂದೆಯ ಹೃದಯವೊಮ್ಮೆ
ಬಡಿತ ನಿಲ್ಲಿಸಿರಬಹುದು...
ನನಗಂತೂ ತಿಳಿಯಲೇ ಇಲ್ಲ...
ತಂದೆಯ ಮರಣದ ಬಳಿಕ
ಕಟ್ಟಿಕೊಂಡವಳ ಮಾತುಕೇಳಿ
ಅಮ್ಮನನು ವೃದ್ಧಾಶ್ರಮದಿ ಬಿಟ್ಟುಬಂದಾಗ
ಅಮ್ಮನಿಗೂ "ಜೀವನವಿಷ್ಟೇ" ಎನಿಸಿರಬಹುದು...
ನನಗಂತೂ ತಿಳಿಯಲೇ ಇಲ್ಲ...
ನನಗೋಸ್ಕರ ಕಾದ "ಮುದಿಜೀವ"
ಕೊನೆಗಳಿಗೆಯಲಿ ನನ್ನ ಬರವನ್ನೇ
ಆಸೆಕಣ್ಗಳಿಂದ ಎದುರುನೋಡುತ್ತಾ
ಗುಟುಕು ಪ್ರಾಣವ ಬಿಟ್ಟಿರಬಹುದು..
ನನಗಂತೂ ತಿಳಿಯಲೇ ಇಲ್ಲ...
ನಾನೀಗ ಕಾಯುತಿರುವೆನು,
ವೃದ್ಧಾಶ್ರಮದ ಬಾಗಿಲಲಿ ನಿಂತು
ಮಕ್ಕಳು ಕರೆದೊಯ್ಯಲು ಬರುವರೆಂದು...
ಮಕ್ಕಳಿಗಂತೂ ತಿಳಿಯುತ್ತಲೇ ಇಲ್ಲ...
ಬಹುಷಃ ಮಕ್ಕಳಿಗೆ ತಿಳಿಯುತ್ತಿತ್ತೇನೋ??,
ನನದೀಗಿನ ಸಂಕಟ ಏನೆಂದು....
ಅಂದು ನನಗೆ ತಿಳಿದಿದ್ದರೆ,
"ತಂದೆ-ತಾಯಿ" ಎಂದರೇನೆಂದು...???
ಕೊನೆಗೂ ನನಗಂತೂ ತಿಳಿಯಲೇ ಇಲ್ಲ....
ಮಕ್ಕಳಿಗೆ ತಿಳಿಹೇಳುವ ಹಕ್ಕು ನನಗಿಲ್ಲ.......

No comments:
Post a Comment